ಜನ ಸಮುದಾಯಕ್ಕೆ ಮೂಲಭೂತ ವೈಜ್ಞಾನಿಕ ಜ್ಞಾನಕ್ಕಿಂತ ಅನ್ವಯಿಕ ವಿಜ್ಞಾನದ ಅಗತ್ಯತೆಯಿದೆ.ಜನ ಸಾಮಾನ್ಯರಿಗೆ ದಿನ ನಿತ್ಯ ಜೀವನದಲ್ಲಿ ಅಳವಡಿಕೆಯಾಗುವ ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕಿದೆ -ಡಾ||ಸಿ.ಆರ್.ಚಂದ್ರಶೇಖರ್

“ಭಗವದ್ಗೀತೆ ಒಂದು ವಿಮರ್ಶೆ” ಕೃತಿ ಬಿಡುಗಡೆ

ಹಾಸನ : ಜನ ಸಮುದಾಯಕ್ಕೆ ಮೂಲಭೂತ ವೈಜ್ಞಾನಿಕ ಜ್ಞಾನಕ್ಕಿಂತ ಅನ್ವಯಿಕ ವಿಜ್ಞಾನದ ಅಗತ್ಯತೆಯಿದೆ. ಆನ ಸಾಮಾನ್ಯರಿಗೆ ದಿನ ನಿತ್ಯ ಜೀವನದಲ್ಲಿ ಅಳವಡಿಕೆಯಾಗುವ ವಿಜ್ಞಾನವನ್ನು ತಿಳಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಖ್ಯಾತ ಮನೋವೈದ್ಯರಾದ ಡಾ|| ಸಿ.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.