ಹಾಸನ : ಜನ ಸಮುದಾಯಕ್ಕೆ ಮೂಲಭೂತ ವೈಜ್ಞಾನಿಕ ಜ್ಞಾನಕ್ಕಿಂತ ಅನ್ವಯಿಕ ವಿಜ್ಞಾನದ ಅಗತ್ಯತೆಯಿದೆ. ಆನ ಸಾಮಾನ್ಯರಿಗೆ ದಿನ ನಿತ್ಯ ಜೀವನದಲ್ಲಿ ಅಳವಡಿಕೆಯಾಗುವ ವಿಜ್ಞಾನವನ್ನು ತಿಳಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಖ್ಯಾತ ಮನೋವೈದ್ಯರಾದ ಡಾ|| ಸಿ.ಆರ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಘಟಕವು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಮ್ಮಿಕೊಂಡಿದ್ದ ಎಂ.ಸಿ.ಡೋಂಗ್ರೆಯವರ “ಭಗವದ್ಗೀತೆ ಒಂದು ವಿಮರ್ಶೆ” ಕೃತಿ ಬಿಡುಗಡೆ ಮತ್ತು ವೈಜ್ಞಾನಿಕ ಹಾಗೂ ವೈಚಾರಿಕ ಜಾಗೃತಿ ಕಾರ್ಯಕ್ರಮದಡಿ ಸಮುದಾಯದೊಂದಿಗೆ ಹಾಗೂ ಸುಜಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ವಿಜ್ಞಾನ ಜನ ಸಾಮಾನ್ಯರಿಗೆ ತಲುಪಬೇಕಾದರೆ ಹಳ್ಳಿ ಹಳ್ಳಿಗೆ, ಮನೆ ಮನೆಗಳಲ್ಲಿ ಚಿಂತನ ಮಂಥನಗಳು ನಡೆಯಬೇಕಾಗಿದೆ. ಮನೆಯಿಂದ ಮನೆಗೆ ಜ್ಞಾನ ವಿಜ್ಞಾನ, ಶಾಲೆಯಿಂದ ಶಾಲೆಗೆ ಜ್ಞಾನ ವಿಜ್ಞಾನ, ವೈಜ್ಞಾನಿಕ ಮನೋವೃತ್ತಿ ಆಂದೋಲನಗಳು, ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳು ಮುಂತಾದ ಕಾರ್ಯಕ್ರಮಗಳನ್ನು ವೈಜ್ಞಾನಿಕ ಸಂಘಟನೆಗಳು ಹಮ್ಮಿಕೊಳ್ಳುವುದರ ಜೊತೆಗೆ ಬಹುಮುಖ್ಯವಾಗಿ ಇಂದಿನ ಪ್ರೌಢ ಶಾಲಾ ಹಂತದಿಂದ ಕಾಲೇಜು ಹಂತದ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವ ಅಗತ್ಯತೆಯಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರಾಜ್ಯದಾದ್ಯಂತ ಮಾಡುತ್ತಾ ಬಂದಿದೆ, ಮುಂದೆಯೂ ಉನ್ನತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಈ.ಬಸವರಾಜು, ಖಜಾಂಚಿ ರವೀಂದ್ರನಾಥ ಸಿರಿವರ, ಸಹಕಾರ್ಯದರ್ಶಿ ಮುರುಳಿ, ರಾಜ್ಯ ಜಂಟಿ ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ರಾಜ್ಯ ಸಮಿತಿಯ ಸದಸ್ಯರಾದ ನಾಗರಾಜ್ ಹೆತ್ತೂರ್, ಗೌರವಾಧ್ಯಕ್ಷ ಎಂ.ಸಿ.ಡೋಂಗ್ರೆ, ಜಿಲ್ಲಾದ್ಯಕ್ಷರಾದ ಗ್ಯಾರಂಟಿ ರಾಮಣ್ಣ, ಹಾಸನ ತಾಲ್ಲೂಕು ಅಧ್ಯಕ್ಷರಾದ ಜುಲ್ಫಿಕರ್ ಅಹಮದ್, ಕಾರ್ಯದರ್ಶಿ ವೇದಶ್ರೀರಾಜ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಅರ್ಚನಾಮೋಹನ್, ನಗರ ಘಟಕದ ಅಧ್ಯಕ್ಷರಾದ ಸುಧಾರವಿಕುಮಾರ್, ಖಜಾಂಚಿ ವಿಶ್ವನಾಥ, ಸಹಕಾರ್ಯದರ್ಶಿ ಯತೀಶ್‍ರಾಯ್, ಉಪಾಧ್ಯಕ್ಷರಾದ ಮ.ನ.ಮಂಜೇಗೌಡ, ಪ್ರಮೀಳಾ, ಪ್ರವೀಣ್‍ಕುಮಾರ್, ತಾಲ್ಲೂಕು ಅಧ್ಯಕ್ಷರಾದ ಆರ್.ಶಿವರಾಂ, ಹೊ.ರಾ.ಪರಮೇಶ್, ಚಂದ್ರಕುಮಾರ್ ಮುಂತಾದವರು ಹಾಜರಿದ್ದರು.

No comments:
Post a Comment